ಜಿಲ್ಲೆ

ಪ್ರಚಾರಕ್ಕಾಗಿ ಉದಯನಿಧಿ ಸ್ಟಾಲಿನ್​​ ಕೀಳುಮಟ್ಟದ ಪ್ರತಿಕ್ರಿಯೆ: ಬ್ರಾಹ್ಮಣ ಮಹಾಸಭಾ ಖಂಡನೆ

ಬೆಂಗಳೂರು: ಸನಾತನ ಧರ್ಮ ಡೆಂಗ್ಯು, ಕಾಲರ, ಕರೊನ ರೋಗ ಇದ್ದಂತೆ. ಅವುಗಳನ್ನು ನಾಶ ಮಾಡಿದಂತೆ ಸನಾತನ ಧರ್ಮವನ್ನು ನಾಶ ಪಡಿಸಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​ ಹೇಳಿಕೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ.

ಉದಯನಿಧಿ ಸ್ಟಾಲಿನ್​ ಪ್ರಚಾರಕ್ಕಾಗಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಸರ್ವೇ ಜನಾ@ ಸುಖಿನೋ ಭವಂತು ಎಂಬ ಕಲ್ಪನೆಗಳ ವಿಚಾರ ಗುಚ್ಚವೇ ಸನಾತನ ಸಂಸತಿ. ಇದನ್ನು ಭಾರತಕ್ಕೆ ಬಂದಂತಹ ದಾಳಿಕೋರರು, ಮತಾಂಧರಿಂದ ನಾಶ ಮಾಡಲು ಸಾಧ್ಯವಾಗಿಲ್ಲ. ಜಗತ್ತಿಗೇ ಗುರುವಾಗಿದ್ದ ಸನಾತನ ಧರ್ಮದ ಬಗ್ಗೆ ಅವಹೇಳನ ಸರಿಯಲ್ಲ ಎಂದು ಬ್ರಾಹ್ಮಣ ಮಹಾಸಭಾ ತಿಳಿಸಿದೆ.