ಬದಿಯಡ್ಕ: ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವ ಅಂಗವಾಗಿ ವಾರದ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹರೀಶ್ ಕುಣಿಕುಳ್ಳಾಯ ಹಾಗೂ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಚಾಲನೆ ನೀಡಿದರು. ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಮಧುಸೂದನ ಆಯರ್, ಗೋಪಾಲ ಯು, ಮನಮೋಹನ ಸಿರಿಬಾಗಿಲು, ಭಾಸ್ಕರ ಆದೂರು, ಶಶಿಧರ ಕುರುಪ್, ನಾರಾಯಣ ಕುರುಪ್ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಕುರುಪ್ ಕಾರ್ಯಕ್ರಮ ನಿರೂಪಿಸಿದರು.