ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು ಮೂಡಿಸುವ ಸಲುವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ದೇಶಾದ್ಯಂತ ಯು- ಜೀನಿಯಸ್ ಕ್ವಿಜ್ ಆಯೋಜಿಸಲಾಗಿತ್ತು. ನಗರದ ಶ್ರೀನಿವಾಸ ಗಾರ್ಡನ್ ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಪರ್ಧೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೇ ಹೆಚ್ಚು ಅಧ್ಯಯನಶೀಲರಾಗಬೇಕು. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬ್ಯಾಂಕಿನ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಭೈರೇಗೌಡ, ಬೆಳಗಾವಿ ಕಚೇರಿ ಮುಖ್ಯಸ್ಥೆ ಆರತಿ ರೌರಿನಕರ್, ಕಲಬುರಗಿಯ ತೇಜಶ್ವಿನಿ ವಿ.ಸಿ, ಸ್ವರ್ಣ ಗ್ರುಪ್ ಆಫ್ ಕಂಪನಿಯ ಡಾ. ವಿ.ಎಸ್.ವಿ. ಪ್ರಸಾದ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಲ್ಪನಾ ಕಾರ್ಯಕ್ರಮ ನಿರೂಪಿಸಿದರು. ಬೆರ್ಟಿ ಆಶ್ಲೆ ಕ್ವಿಜ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದರು.
ಬೆಳಗಾವಿಯ ಜಿಎಸ್ಎಸ್ ಕಾಲೇಜಿನ ತನ್ಮಯ ಕುರುಂದವಾಡ, ರಾಜಸಿ ಗೋಜಗೇಕರ ಅವರಿಗೆ ಟ್ರೋಫಿ ವಿತರಿಸಲಾಯಿತು.
ಕರ್ನಾಟಕ ಉತ್ತರ ಭಾಗದ 13 ಜಿಲ್ಲೆಗಳ 120 ಶಾಲೆಗಳ 916 ವಿದ್ಯಾರ್ಥಿಗಳು, 400 ಶಿಕ್ಷಕರು, ಪೋಷಕರು ಭಾಗವಹಿಸಿದ್ದರು. ಪ್ರಾದೇಶಿಕ ಮಟ್ಟದಲ್ಲಿ ಈ ಸ್ಪರ್ಧೆಯನ್ನು 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು.
ಈ ಹಂತದಲ್ಲಿ ವಿಜೇತರು ಮೈಸೂರಿನಲ್ಲಿ ಆ. 29ರಂದು ನಡೆಯುವ ಸೆಮಿಫೈನಲ್ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ನವೆಂಬರ್ ನಲ್ಲಿ ಅಂತಿಮ ಯು ಜೀನಿಯಸ್ ಸ್ಪರ್ಧೆ ಮುಂಬೈನಲ್ಲಿ ನಡೆಯಲಿದ್ದು, ವಿಜೇತರಿಗೆ ಟ್ರೋಫಿ ಹಾಗೂ 2 ಲಕ್ಷ ರೂ. ನಗದು, ಪ್ರಮಾಣ ಸಿಗಲಿದೆ.