ಜಿಲ್ಲೆ

ಸಿಡಿಲು ಬಡಿದು ಇಬ್ಬರು ಮಹಿಳೆಯರಿಗೆ ತೀವ್ರಗಾಯ

ಮೈಸೂರು: ತಾಲೂಕಿನ ದಡದ ಕಲ್ಲಹಳ್ಳಿಯಲ್ಲಿ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ತೀವ್ರ ಗಾಯಗೊಂಡಿದ್ದಾರೆ.

ಗ್ರಾಮದ ಸರೋಜಮ್ಮ(40) ಮತ್ತು ಮಹದೇವಮ್ಮ (70) ಗಾಯಗೊಂಡವರು. ಜಮೀನಿನಲ್ಲಿ ಬೀನ್ಸ್ ಕೊಯ್ಲು ಮಾಡುತ್ತಿದ್ದ ಸಂದರ್ಭದಲ್ಲಿ ಧಾರಾಕಾರ ಮಳೆ ಶುರುವಾಗಿದ್ದು, ತಕ್ಷಣವೇ ಸಿಡಿಲು ಬಡಿದಿದೆ. ಇವರು ಕಿರುಚಾಡುತ್ತಿದ್ದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನ ಕೆಲಸಗಾರು ದೌಡಾಯಿಸಿದ್ದು, ಅಸ್ವಸ್ಥರಾಗಿದ್ದ ಇಬ್ಬರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.


ಇವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಎಂ.ಎಸ್.ಶೋಭಾ ತಿಳಿಸಿದ್ದಾರೆ.