ಯಲ್ಲಾಪುರ: ಗಾಂಜಾ ವ್ಯಾಪಾರದಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ಪಟ್ಟಣದ ತಳ್ಳಿಗೇರಿ ಕ್ರಾಸ್ ಬಳಿ ಪೊಲೀಸರು ಬಂಧಿಸಿ 1.84 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಅಯೋಧ್ಯಾನಗರದ ನಸೀಮಾಬಾನು ರೆಹ್ಮಾನ ಎಂಬಾಕೆ ಗಾಂಜಾ ಮಾರಲು ಬಂದಿದ್ದು, ಅವಳಿಂದ ಪಟ್ಟಣದ ಅಂಬೇಡ್ಕರ್ ನಗರದ ಆಯಿಷಾ ಅಬ್ದುಲ್ ಮುನಾಫ್ ಗಾಜನೂರು ಎಂಬಾಕೆ ಖರೀದಿಸುತ್ತಿದ್ದಳು. ಈ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.