ತುಮಕೂರು: ದ್ವಿಚಕ್ರ ವಾಹನಕ್ಕೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.
ದ್ವಿಚಕ್ರವಾಹನದಲ್ಲಿ ಸಹೋದರಿಯನ್ನು ಕರೆತರಲು ಹೋಗಿದ್ದಾಗ ಪ್ರೀತಮ್ (15), ವಿಜಯಕುಮಾರ್(15)_ ಮೃತಪಟ್ಟಿದ್ದು ಇಬ್ಬರು ಎಸ್ಸೆಸ್ಸೆಲ್ಸಿ ಓದುತ್ತಿದ್ದರು.
ಕ್ಯಾತಸಂದ್ರದ ರಿಂಗ್ ರೋಡ್‌ನ ಕೆಸರಮಡು ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ 10.30ರಲ್ಲಿ ಅಪಘಾತ ಸಂಭವಿಸಿದ್ದು ಮೃತ ಬಾಲಕರಿಬ್ಬರು ಕೌತಮಾರನಹಳ್ಳಿ ಗ್ರಾಮದವರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ಎಫ್‌ಡಿಎ ಆಗಿರುವ ಪ್ರೀತಮ್ ಸಹೋದರಿ ಧರಣಿ ಅವರನ್ನು ಕರೆತರಲು ಹೋಗಿದ್ದಾಗ ಈ ಘಟನೆ ನಡೆದಿದೆ. ಪ್ರೀತಮ್, ವಿಜಯಕುಮಾರ್ ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದರು.
ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.