ಜಿಲ್ಲೆ

ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ಮೃತ್ಯು

Dakshina Kannada

ಈಶ್ವರಮಂಗಲ: ಪುತ್ತೂರು ತಾಲೂಕು ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ಗುರುವಾರ ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ, ನೆಟ್ಟಣಿಗೆ ಮುಡ್ನೂರು ಗ್ರಾಮದ ರಾಗಳಿ ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಮೋಹಿತ್ ಗೌಡ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಾಹನ ಅಪಘಾತಕ್ಕೀಡಾಗಿ 15 ಅಡಿಯಷ್ಟು ದೂರ ಚಲಿಸಿ ಮಗುಚಿ ಬಿದ್ದಿದೆ. ಮೋಹಿತ್ ಗೌಡ ರಸ್ತೆ ಅಂಚಿಗೆ ಬಡಿದು ತಲೆ ಒಡೆದು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಿಜೆಪಿ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮೋಹಿತ್  ಒಂದು ತಿಂಗಳ ಹಿಂದೆಯಷ್ಟೇ ವಾಹನ ಖರೀದಿಸಿದ್ದರು. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.