ಕುಶಾಲನಗರ:
ಕುಶಾಲನಗರ ತಾಲೂಕು ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಗುರುವಾರ ರಾತ್ರಿ ಹಣದ ವಿಷಯಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಇಬ್ಬರನ್ನು ಕೊಡಲಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಜೋಸೆಫ್ ಮತ್ತು ವಸಂತ ಕೊಲೆಯಾದವರು. ಪ್ರಕರಣಕ್ಕೆ ಸಂಧಿಸಿದAತೆ ಆರೋಪಿ ಗಿರೀಶ್‌ನನ್ನು ಬಂಧಿಸಲಾಗಿದ್ದು, ದುಷ್ಕೃತ್ಯಕ್ಕೆ ಬಳಸಿದ್ದ ಕೊಡಲಿ ವಶಪಡಿಸಿಕೊಳ್ಳಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಬಸವೇಶ್ವರ ಬಡವಾಣೆ ನಿವಾಸಿ ಜೋಸೆಫ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಜತೆಯಲ್ಲಿ ಕೆಲಸ ಮಾಡುತ್ತಿದ್ದ ಸುಂದರನಗರ ನಿವಾಸಿ ವಸಂತ ಅವರೊಂದಿಗೆ ಕೆೆಲಸ ಮುಗಿಸಿ ಬಂದು ಕೂಡ್ಲೂರು ಮನೆಯಲ್ಲಿದ್ದ ಸಂದರ್ಭ ಈ ಹಿಂದೆ ಜೋಸೆಫ್‌ನೊಂದಿಗೆ ಕೆಲಸ ಮಾಡುತ್ತಿದ್ದ ಅದೇ ಬಡವಾಣೆ ನಿವಾಸಿ ಗಿರೀಶ್ ಎಂಬಾತ ಈ ಹಿಂದೆ ಕೆಲಸ ಮಾಡಿಕ್ಕಾಗಿ ಹಣ ನೀಡುವಂತೆ ಕೇಳಿದ್ದಾನೆ. ಆಗ ಜೋಸೆಫ್ ಯಾವುದೇ ಹಣ ನೀಡಲು ಬಾಕಿ ಇಲ್ಲ ಎಂದು ತಿಳಿಸಿದಾಗ ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಹೇಳಿ ಮನೆಗೆ ತೆರಳಿದ ಗಿರೀಶ ಸ್ವಲ್ಪ ಸಮಯದ ನಂತರ ಕೊಡಲಿ ಹಿಡಿದುಕೊಂಡು ಬಂದು ಏಕಾ-ಏಕಿ ಜೋಸೆಫ್ ದವಡೆ, ಗಲ್ಲದ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ಹಲ್ಲೆ ತಡೆಯಲು ಪ್ರಯತ್ನಿಸಿದ ವಸಂತ ಮೇಲೂ ಕೊಡಲಿಯಿಂದ ತಲೆಯ ಭಾಗಕ್ಕೆ ಹೊಡೆದಿದ್ದಾನೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಜೋಸೆಫ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟರೆ, ವಸಂತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಎಸ್.ಪಿ. ರಾಮರಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.