ಚಿಂತಾಮಣಿ: ಗ್ರಾಮಾಂತರ ಠಾಣೆ, ಶಿಡ್ಲಘಟ್ಟ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸೇರಿ ವಿವಿಧ ಕಡೆಗಳಲ್ಲಿ ದೇವಸ್ಥಾನಗಳ ಹುಂಡಿ, ಆಭರಣ, ಬೋರ್ವೆಲ್ ಕೇಬಲ್, ಬೈಕ್ಗಳ ಕದ್ದು ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.ಕೆಂದನಹಳ್ಳಿಯ ಶ್ರೀನಿವಾಸ್, ಶಬ್ಬಿರ್ ಪಾಷಾ ಬಂಧಿತರರು.ತಾಲೂಕಿನ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಪೊಲೀಸ್ ಅಧೀಕ್ಷಕ ಪಿ.ಮುರಳೀಧರ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್, ಪಿಎಸ್ಐ ಮಮತಾ, ನಾಗೇಂದ್ರ ಕುಮಾರ್, ನಾರಾಯಣಸ್ವಾಮಿ, ಎಎಸ್ಐ ದಿನೇಶ್, ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ ಕೋಲಾರ ರಸ್ತೆಯ ಆಂಜನೇಯಸ್ವಾಮಿ ದೇವಾಲಯದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.