ಜಿಲ್ಲೆ

ಸಮೀಕ್ಷೆಗೆ ಹಾಜರಾಗದ ಇಬ್ಬರ ಅಮಾನತ್ತು

ರಾಮನಗರ:  ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳದ  ಓರ್ವ ಶಿಕ್ಷಕಿ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ನೌಕರರೊಬ್ಬರನ್ನು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಆದೇಶ ಹೊರಡಿಸಿದ್ದಾರೆ.

ರಾಮನಗರ ತಾಲೂಕಿನ ಶಿಕ್ಷಕಿ ಅಮೃತಾ ಭಟ್ ಮತ್ತು ರಾಮನಗರ ಪಾಲಿಟೆಕ್ನಿಕ್ ಕಾಲೇಜಿನ ಉಮೇಶ್ ಅಮಾನತ್ತುಗೊಂಡವರು.

ಇಬ್ಬರನ್ನೂ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಸಮೀಕ್ಷೆ ಆರಂಭಗೊಂಡರೂ, ಇಬ್ಬರೂ ಸಹ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವುದಿಲ್ಲ.  ಈ ಹಿನ್ನೆಲೆಯಲ್ಲಿ ನಿಯಮದಂತೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದರೂ, ಕರೆ ಮಾಡಿದರೂ, ವಾಟ್ಸ್ ಆಪ್ ಸಂದೇಶ ಕಳಿಸಿದರೂ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.

ಈ ಹಿನ್ನೆಲೆಯಲ್ಲಿ  ಸಮೀಕ್ಷೆ ಕಾರ್ಯದಲ್ಲಿ ಬೇಜವಬ್ದಾರಿತನ , ನಿರ್ಲಕ್ಷ್ಯತೋರಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಆದೇಶ ಹೊರಿಡಿಸಿದ್ದಾರೆ.