ವಿಜಯಪುರ : ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಾನ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿ ಬರಾಕುಡಾ ನೆಟ್ವರ್ಕ್ಸ್ಗೆ ವಾರ್ಷಿಕ 8.32 ಲ ರೂ. ಪ್ಯಾಕೇಜ್ನ ಜತೆಗೆ ಪೈಥಾನ್ ಪರೀಾ ಡೆವಲಪರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಪರಿಣತಿ ಹೊಂದಿದ ವಿದ್ಯಾರ್ಥಿ ಸಮರ್ಥ ಭೂತನಾಳ ಮತ್ತು ಮಾಹಿತಿ ವಿಾನ ಮತ್ತು ಇಂಜಿನಿಯರಿಂಗ್ನ ವಿದ್ಯಾರ್ಥಿನಿ ರಾಣಿ ನದಾಫ ಆಯ್ಕೆಗೊಂಡವರು.
ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರಶಾಂತ ಪಾಟೀಲ ಮಾತನಾಡಿ, ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಒತ್ತು ನೀಡುತ್ತಿದೆ. ಉದ್ಯೋಗಾವಕಾಶಗಳಿಗೆ ಅವರನ್ನು ಸಿದ್ಧಪಡಿಸಲು ಉದ್ಯಮ ತರು ಮತ್ತು ನುರಿತ ತರಬೇತುದಾರರನ್ನು ಆಹ್ವಾನಿಸುತ್ತದೆ ಎಂದು ತಿಳಿಸಿದರು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಡಾ. ಮಂಜುನಾಥ ಪಿ. ಅಭಿನಂದಿಸಿದ್ದಾರೆ.
ಬಹುರಾಷ್ಟ್ರೀಯ ಕಂಪನಿ ಬರಾಕುಡಾ ನೆಟ್ವರ್ಕ್ಸ್ಗೆ ಆಯ್ಕೆಯಾದ ವಿಜಯಪುರದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಾನ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾಳೇಜಿನ ಪ್ರಾಚಾರ್ಯ ಡಾ. ಮಂಜುನಾಥ ಪಿ., ಪ್ರಶಾಂತ ಪಾಟೀಲ ಇದ್ದಾರೆ.