ಆನೇಕಲ್ : ಗುರುವಾರದಿಂದ (ಮಾ.20) ಆರಂಭವಾಗುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲಾ ಅಂತಿಮ ಪರೀೆ ಬರೆಯಲು ಅತ್ತಿಬೆಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪೊಲೀಸ್ ರಣೆ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಅತ್ತಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ, ಅಲ್ಲಿನ ಕೊಳಕು ಪರಿಸರ, ದುರ್ನಾತ ಖಂಡಿಸಿ ಶಾಲಾ ವಿದ್ಯಾರ್ಥಿಗಳ ಪಾಲಕರು ಕ್ಷೆತ್ರ ಶಿಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಆಯೋಗ, ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯ ಮೊಯ್ದಿನ್ ಕುಟ್ಟಿ ಅವರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಈ ನಡುವೆ ಇದೇ ಶಾಲೆಯ ಅಧ್ಯಾಪಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ದೂರಿನನ್ವಯ, ಅಧ್ಯಾಪಕನ ವಿರುದ್ಧ ಪೋಕ್ಸೋ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿತ್ತು. ಈ ನಡುವೆ ಜಾಮೀನಿನ ಮೇಲೆ ಹೊರಬಂದ ಆರೋಪಿ ಅಧ್ಯಾಪಕ, ಶಾಲಾ ಕಾಂಪೌಂಡ್ನ ಕ್ವಾಟ್ರರ್ಸ್ನಲ್ಲೆ ವಾಸ ಮುಂದುವರಿಸಿದ್ದ. ಇದರ ನಡುವೆ, ದೂರು ನೀಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾಲಕರು ಶಾಲಾ ಆವರಣಕ್ಕೆ ಪದೇಪದೆ ಬರುವುದು ಬೇಡ ಎಂದು ಇತರ ಅಧ್ಯಾಪಕ ಸಿಬ್ಬಂದಿ ಅತ್ತಿಬೆಲೆ ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದರು. ಹೀಗಾಗಿ ಶಾಲಾ ಆವರಣಕ್ಕೆ ಬರದಂತೆ ಪೊಲೀಸರು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು. ಆ ನಂತರ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಿರುಕುಳ, ಮಾನಸಿಕ ಹಿಂಸೆ ಮುಂದುವರಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಭಯಭೀತರಾಗಿ ಮೂರು ವಾರಗಳಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಈ ನಡುವೆ ಮಾ.20ರಿಂದ ಅಂತಿಮ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಪಾಲಕರು ಆತಂಕಗೊಂಡು, ಪರೀೆ ಬರೆಯಲು ಇಬ್ಬರು ವಿದ್ಯಾರ್ಥಿಗಳು ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಕೊಂಬಾರಿನ ರಾಮಕೃಷ್ಣ ಹೊಳ್ಳ ಅವರನ್ನು ಸಂಪರ್ಕಿಸಿದ್ದರು. ಹೀಗಾಗಿ ಅವರು ನೀಡಿದ ಸಲಹೆಯಂತೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ.ಎನ್.ಪ್ರವಿಣ್ಕುಮಾರ್ ಅವರನ್ನು ಸಂಪರ್ಕಿಸಿ ಹೈಕೋರ್ಟ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಕ್ಕಳ ಪರ ಮಂಡಿಸಿದ ವಾದ ಆಲಿಸಿ, ಪ್ರಕರಣದ ತೀವ್ರತೆ ಮನಗಂಡು ಆ ವಿದ್ಯಾರ್ಥಿಗಳಿಗೆ ಮಾ.20ರಿಂದ 25ರವರೆಗೆ ಅಂತಿಮ ಪರೀಕ್ಷೆ ಬರೆಯಲು ಸೂಕ್ತ ಪೊಲೀಸ್ ರಣೆ ನೀಡುವಂತೆ ಹಾಗೂ ಪಾಲಕರಿಗೆ ಶಾಲಾ ಆವರಣಕ್ಕೆ ರ್ನಿಬಂಧ ಹೇರದಂತೆ ಅತ್ತಿಬೆಲೆ ಪೊಲೀಸರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತುರ್ತು ನೋಟಿಸ್ ನೀಡಿ ಪ್ರಕರಣವನ್ನು
ಏ.8ಕ್ಕೆ ಮುಂದೂಡಿದೆ.