ಮಂಜೇಶ್ವರ: ಮೀಯಪದವಿನಲ್ಲಿ ಶುಕ್ರವಾರ ಬೆಳಗ್ಗೆ ಶಾಲಾ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಮೀಯಪದವು ಬೆಜ್ಜಂಗಳ ನಿವಾಸಿ ಸುರೇಶ್ ಎಂಬವರ ಪುತ್ರ ಅಭಿ(20) ಹಾಗೂ ಮೀಯಪದವು ಹರೀಶ್ ಶೆಟ್ಟಿ ಎಂಬುವರ ಪುತ್ರ ಪ್ರತೀಶ್(20) ಮೃತರು.
ಮಂಗಳೂರು ಶ್ರೀದೇವಿ ಕಾಲೇಜು ಹಾಗೂ ಇನ್ನೋರ್ವ ಇಂಡಸ್ ಕಾಲೇಜಿನ ವಿದ್ಯಾರ್ಥಿ. ಇವರ ಜೊತೆಗಿದ್ದ ನಮಿತ್ ಕುಮಾರ್ ಎಂಬವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದ್ದಾರೆ.