ಶಿವಮೊಗ್ಗ: ಪ್ರತ್ಯೇಕ ಪ್ರಕರಣಗಳಲ್ಲಿ ರಸ್ತೆ ಬದಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿಗಳಿಬ್ಬರು ಮೃತಪಟ್ಟಿದ್ದಾರೆ.
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಹತ್ತಿರ ರಸ್ತೆ ಬದಿ 50-55 ವರ್ಷದ ವ್ಯಕ್ತಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗೋವಿಂದಪುರದ ಹಾಯ್‌ಹೊಳೆ ರಸ್ತೆ ಬದಿಯಲ್ಲಿ ಆ.14ರಂದು ಅಸ್ವಸ್ಥಗೊಂಡಿದ್ದ 65 ವರ್ಷದ ವೃದ್ಧನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ದಿದ್ದು ತುಂಗಾನಗರ ಠಾಣೆಯಲ್ಲಿ ಪ್ರಕರಣ ಪ್ರತ್ಯೇಕ ದಾಖಲಾಗಿವೆ.