ಜಿಲ್ಲೆ

ಎರಡು ವಿಶೇಷ ರೈಲುಗಳಿನ್ನೂ ದೈನಂದಿನ ಸಂಚಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎಸ್​ಎಸ್​ಎಸ್ ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು- ಎಸ್​ಎಸ್​ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ಎಕ್ಸ್​ಪ್ರೆಸ್ ರೈಲು ಮತ್ತು ಯಶವಂತಪುರ- ವಿಜಯಪುರ- ಯಶವಂತಪುರ ವಿಶೇಷ ಎಕ್ಸ್​ಪ್ರೆಸ್ ರೈಲು ಇನ್ನುಮುಂದೆ ದೈನಂದಿನ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲುಗಳಾಗಿ ಸಂಚರಿಸಲಿವೆ.

ಎಸ್​ಎಸ್​ಎಸ್ ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು- ಎಸ್​ಎಸ್​ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು ಡಿ. 8 ರಿಂದ ನಿಯಮಿತ ರೈಲು ಆಗಿ ಸಂಚರಿಸಲಿದೆ. ಡಿ. 8 ರಿಂದ ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 6.50ಕ್ಕೆ ಬೆಂಗಳೂರು ತಲುಪಲಿದೆ.

ಬೆಂಗಳೂರಿನಿಂದ ಡಿ. 9 ರಿಂದ ರಾತ್ರಿ 11.55ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿ ತಲುಪಲಿದೆ.

ಯಶವಂತಪುರ-ವಿಜಯಪುರ-ಯಶವಂತಪುರ ದೈನಂದಿನ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಡಿ. 8 ರಿಂದ ನಿಯಮಿತ ಸಂಚಾರ ಪ್ರಾರಂಭಿಸಲಿದೆ.

ಡಿ. 8ರಿಂದ ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 11.25ಕ್ಕೆ ವಿಜಯಪುರ ತಲುಪಲಿದೆ. ಡಿ. 9 ರಿಂದ ಮಧ್ಯಾಹ್ನ 1.50ಕ್ಕೆ ವಿಜಯಪುರದಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5.10ಕ್ಕೆ ಯಶವಂತಪುರ ತಲುಪಲಿದೆ.