ಜಿಲ್ಲೆ

ಅಪಘಾತದಲ್ಲಿ ಇಬ್ಬರಿಗೆ ತೀವ್ರ ಗಾಯ

ಎನ್.ವೆಂಕಟೇಶ್

ಚಿಂತಾಮಣಿ: ನಗರದ ಕನ್ನಂಪಲ್ಲಿಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಬುಧುವಾರ ಬೆಳಗ್ಗೆ ನಡೆದಿದೆ.

ಕನ್ನಂಪಲ್ಲಿಯ ನಿವಾಸಿಗಳಾದ ಸೀನಪ್ಪ (35), ಶ್ರೀನಿವಾಸ್ (45) ಗಾಯಗೊಂಡವರು.

ಶ್ರೀನಿವಾಸ್ ಬುಧವಾರ ಬೆಳಗ್ಗೆ ನಗರದ ಹಳೇ ಆರ್‌ಟಿಒ ಕಚೇರಿ ಬಳಿ ಟೀ ಕುಡಿದು ಅಂಗಡಿಯಿಂದ ಬಂದು ಬೈಕ್ ಏರಿ ರಸ್ತೆಗೆ ಬಂದಿದ್ದಾರೆ. ಅದೇ ಸಮಯದಲ್ಲಿ ಅತಿವೇಗವಾಗಿ ಬಂದು ಬೈಕ್ ಡಿಕ್ಕಿ ಹೊಡೆದಿದೆ. ಇಬ್ಬರೂ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಎರಡೂ ಬೈಕ್‌ಗಳು ಜಖಂಗೊಂಡಿವೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.