ಬಳ್ಳಾರಿ ; ಇಲ್ಲಿನ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ಆ. 2 ಮತ್ತು 3 ರಂದು ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಹಾಗೂ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯಮಟ್ಟದ ‘ ಬಳ್ಳಾರಿ ರಾಘವ ’ ಪ್ರಶಸ್ತಿಗೆ ರಂಗಕರ್ಮಿ, ಕರ್ನಾಟಕದಿಂದ ನಟ ಡಿಂಗ್ರಿ ನಾಗರಾಜ ಮತ್ತು ಆಂಧ್ರಪದೇಶದ ಮೇಡೂರು ಗ್ರಾಮದ ರಂಗಕರ್ಮಿ ಗುಮ್ಮಡಿ ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 21.100 ಸಾವಿರ ರೂ. ನಗದು ಮತ್ತು ಬೆಳ್ಳಿ ಫಲಕ ಹೊಂದಿದೆ. ಆ. 2 ರಂದು ಧಾರವಾಡ ಕಲಾ ಸಂಗಮ ಸಂಸ್ಥೆಯಿಂದ ಪ್ರಭು ಹಂಚಿನಾಳ್ ನಿರ್ದೇಶನದ ಕನ್ನಡದ ಸಮರಸಿಂಹ ಸಂಗೋಳ್ಳಿ ರಾಯಣ್ಣ ಹಾಗೂ ಆ.3 ರಂದು ವಿಜಯವಾಡದ ಶ್ರೀರಾಮನ್ ಫೌಂಡೇಷನ್ ಶ್ರೀಸಾಯಿಬಾಬ ನಾಟ್ಯ ಮಂಡಳಿಯಿಂದ ಡಾ.ಪಿ.ವಿ.ಎನ್. ಕೃಷ್ಣ ನಿರ್ದೇಶನದ ತೆಲುಗಿನ ಜಯಯೋ ಛತ್ರಪತಿ ಶಿವಾಜಿ ಮಹಾರಾಜ ನಾಟಕಗಳ ಪ್ರದರ್ಶನ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.