ಜಿಲ್ಲೆ

ಇಬ್ಬರು ಕಳ್ಳಿಯರ ಬಂಧನ

ಎನ್.ವೆಂಕಟೇಶ್

ಚಿಂತಾಮಣಿ: ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಬಸ್ ಹತ್ತುವ ಸಮಯದಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆ ಮಂಗರವಾಡಿಬಾಪು ನಗರದ ವಿಠ್ಠಲ್ ನಗರದ ಸೇಡಂ ರಸ್ತೆಯ ಕರೀನಾ (24), ಕಲಬುರಗಿಯ ಭರತ್‌ನಗರದ ನೀಲಮ್ಮ (22) ಬಂಧಿತರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸ್ ಸಿಬ್ಬಂದಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಆರೋಪಿಗಳು ಪ್ರಯಾಣಿಕರು ಬಸ್ ಹತ್ತುವ ಸಮಯದಲ್ಲಿ ಅವರ ಬ್ಯಾಗ್‌ನಿಂದ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಬಂಧಿತರು ನೀಡಿದ ಮಾಹಿತಿಯಂತೆ ನಗರದಲ್ಲಿ ನಡೆದಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 90,500 ರೂ. ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ವಿಜಿಕುಮಾರ್, ಪಿಎಸ್‌ಐ ರಮೇಶ್ ಮತ್ತು ಸಿಬ್ಬಂದಿ ಸಿದ್ಧಾರೂಢ, ಮಮತಾ, ಸುಧಾ, ಸ್ವಾತಿ, ಸುನೀತಾ ಹಾಗೂ ಸುರೇಶ್ ಕಾರ್ಯಕ್ಕೆ ಎಸ್‌ಪಿ ಕುಶಾಲ್ ಚೌಕ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.