ಜಿಲ್ಲೆ

ಅಂದರ್​ ಬಾಹರ್​ ಅಂತಿದ್ದ ಇಬ್ಬರು ಪೊಲೀಸರಿಗೆ ಈಗ ಅಮಾನತು ಭಾಗ್ಯ

Mandara

ಬೆಂಗಳೂರು: ನಗರದ ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ಹೋಟೆಲ್​ ರೂಂ ಒಂದರಲ್ಲಿ ಅಂದರ್​ ಬಾಹರ್​ ಆಡುತ್ತಾ ಕುಳಿತು, ಪೊಲೀಸರ ವಶಕ್ಕೆ ಸಿಲುಕಿಬಿದ್ದಿದ್ದ ಇಬ್ಬರು ಪೊಲೀಸ್​ ಪೇದೆಗಳನ್ನು ಅಮಾನತು ಮಾಡಲಾಗಿದೆ. ಮಲ್ಲೇಶ್​ ಮತ್ತು ಗವಿ ಸಿದ್ದೇಶ್​ ಅಮಾನತಾದ ಸಿಬ್ಬಂದಿಗಳು.

ಅಕ್ಟೋಬರ್​ 19ರಂದು ಪುಟ್ಟೇನಹಳ್ಳಿಯ ಹೋಟೆಲ್​ ಒಂದರ ಮೇಲೆ ದಾಳಿ ಮಾಡಲಾಗಿತ್ತು. ಆ ಸಮಯದಲ್ಲಿ ಅಲ್ಲಿ ಅಂದರ್​ ಬಾಹರ್​ ಆಡುತ್ತಿದ್ದ ಒಂಬತ್ತು ಜನರನ್ನು ಬಂಧಿಸಲಾಗಿತ್ತು. 52 ಸಾವಿರ ರೂಪಾಯಿಯನ್ನೂ ವಶ ಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿರುವ ಅಧಿಕಾರಿಗಳು ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಈ ಇಬ್ಬರು ಸಿಬ್ಬಂದಿಗಳು ಉಪ್ಪಾರಪೇಠೆ ಪೊಲೀಸ್​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಹೇಳಲಾಗಿದೆ.