ಹೂವಿನಹಡಗಲಿ: ಮಾನ್ಯರ ಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಎರಡು ಕೊಳವೆಬಾವಿಗಳ ನೀರು ಬಳಕೆಗೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸಾಕು! ಈ ಎಲ್ಲಾ ಲಾಭಗಳು ನಿಮ್ಮದಾಗುತ್ತದೆ… cumin water
ಗ್ರಾಮಸ್ಥರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐದು ಕೊಳವೆಬಾವಿಗಳ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಗ್ರಾಮದ ಎಸ್ಸಿ ಕಾಲನಿಯ ಎರಡು ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಗುರುವಾರ ವರದಿ ಬಂದಿದೆ. ಎರಡೂ ಕೊಳವೆಬಾವಿ ನೀರು ಬಳಸದಂತೆ ಕ್ರಮವಹಿಸಲು ಗ್ರಾಪಂಗೆ ಸೂಚಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಅಂಬೇಡ್ಕರ್ ಸನಗುಂದ ವಿಜಯವಾಣಿಗೆ ತಿಳಿಸಿದರು.
ಗುರುವಾರ ಮತ್ತೆ ಐದು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಶುಕ್ರವಾರ ಇಬ್ಬರು ಮಕ್ಕಳಿಗೆ ವಾಂತಿ-ಭೇದಿಯಾಗಿದೆ ಎಂದು ಟಿಎಚ್‌ಒ ಡಾ.ಸ್ವಪ್ನಾ ಕಟ್ಟಿ ತಿಳಿಸಿದರು. ತಾಪಂ ಇಒ ಉಮೇಶ್ ಮೈನಹಳ್ಳಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಮಾನ್ಯರಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಕ್ಕೆ ಸಂಬಂಧಿಸಿದಂತೆ ಪಿಡಿಒ ಮಹಮ್ಮದ್ ರಫಿ ಅವರನ್ನು ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಗುರುವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತಾಲೂಕಿನ ಮಹಾಜನದಹಳ್ಳಿ ಗ್ರಾಪಂ ಕಾರ್ಯದರ್ಶಿ ಪ್ರಭಾಕರ್ ಅವರಿಗೆ ಪ್ರಭಾರ ಪಿಡಿಒ ಆಗಿ ನಿಯೋಜನೆ ಮಾಡಲಾಗಿದೆ.ಪಿಡಿಒ ಅಮಾನತು