ವಿಜಯಪುರ ತಾಲೂಕಿನ ಕುಮಟಗಿ ಕೆರೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದರು.  
ಜಿಲ್ಲೆ

ಕುಮಟಗಿ ಕೆರೆಯಲ್ಲಿ ಇಬ್ಬರು ನೀರು ಪಾಲು

Vijyapura - Parsuram Bhasagi

ವಿಜಯಪುರ: ಬೇಸಿಗೆ ಹಿನ್ನೆಲೆ ಈಜಲು ಕೆರೆಗೆ ತೆರಳಿದ್ದ ಆರು ಜನರಿದ್ದ ಆರು ಜನರ ಪೈಕಿ ಇಬ್ಬರು ಅಸುನೀಗಿದ್ದು, ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಕುಮಟಗಿ ಕೆರೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಜಮಖಂಡಿ ನಿವಾಸಿ ಮಹ್ಮದ್‌ಕೈಫ್ ಜಮಾದಾರ (19) ಹಾಗೂ ಸೋಹೇಲ್ ಭಾಷಾಸಾಹೇಬ ಹತ್ತರಕಿಹಾಳ (25) ಮೃತರಾಗಿದ್ದಾರೆ. ಒಟ್ಟು ಆರು ಜನ ಕೆರೆಯಲ್ಲಿ ಈಜಲೆಂದು ತೆರಳಿದ್ದಾರೆ. ತೆಪ್ಪದಲ್ಲಿ ತೇಲುತ್ತಿದ್ದಾಗ ತೆಪ್ಪ ಮಗುಚಿದೆ. ಈಜು ಬರುತ್ತಿದ್ದ ಮೂವರು ಈಜಿ ದಡ ಸೇರಿದ್ದಾರೆ. ಇನ್ನೋರ್ವನನ್ನು ಹೇಗೋ ಎಳದು ತಂದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಢಾಯಿಸಿದ್ದಾರೆ. ಓರ್ವನ ಶವ ಸಿಕ್ಕಿದ್ದು, ಇನ್ನೋರ್ವನ ಶೋಧಕ್ಕಾಗಿ ತಡರಾತ್ರಿವರೆಗೆ ಕಾರ್ಯಾಚರಣೆ ಮುಂದುವರಿದಿತ್ತು.