ಆಂಬುಲೆನ್ಸ್​ನಲ್ಲಿ ಸಲ್ಮಾ ಚಪ್ಪರಬಂದ, ಶಕೀರಾಬೇಗಂ ಅಕ್ಬರ್​ ಶಿಶುಗಳಿಗೆ ಜನ್ಮ ನೀಡಿರುವುದು. 
ಜಿಲ್ಲೆ

ಆಂಬುಲೆನ್ಸ್​ನಲ್ಲಿ ಇಬ್ಬರಿಗೆ ಹೆರಿಗೆ

ಗಿರೀಶ ಸಗರ

ನಾಲತವಾಡ: ಹೆರಿಗೆಗೆಂದು ಆಂಬುಲೆನ್ಸ್​ನಲ್ಲಿ ಮಂಗಳವಾರ ರಾತ್ರಿ ಇಬ್ಬರು ಗರ್ಭಿಣಿಯರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತೀವ್ರ ಹೆರಿಗೆ ನೋವಿನಿಂದ ಒಬ್ಬರಿಗೆ ಹೆರಿಗೆಯಾದ ಣಮಾತ್ರದಲ್ಲೇ, ಆತಂಕಕ್ಕೆ ಒಳಗಾದ ಇನ್ನೊಬ್ಬ ಮಹಿಳೆಯೂ ಮಗುವಿಗೆ ಜನ್ಮ ನೀಡಿದ್ದಾರೆ.

ಕಾಳಗಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಇಬ್ಬರೂ ಹೆರಿಗೆಗೆ ಬಂದಾಗ ಜಿಲ್ಲಾಸ್ಪತ್ರೆಗೆ ಕಳಿಸಲಾಗಿತ್ತು. ಕಂದಗನೂರ ಗ್ರಾಮದ ಸಲ್ಮಾ ಚಪ್ಪರಬಂದ ಅವರು ಗಂಡು ಹಾಗೂ ಕಾಳಗಿ ಗ್ರಾಮದ ಶಕೀರಾಬೇಗಂ ಅಕ್ಬರ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಶಿಶುಗಳು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆರೈಕೆಯಲ್ಲಿವೆ ಎಂದು ತಿಳಿದು ಬಂದಿದೆ.

ಆಂಬುಲೆನ್ಸ್​ ಸಿಬ್ಬಂದಿ ಶಿವು ಕೂಚಬಾಳ, ಈರಣ್ಣ ಕುಂಬಾರ ಹಾಗೂ ಇತರರು ಹೆರಿಗೆ ಮಾಡಿದ್ದಾರೆ.