ಜಿಲ್ಲೆ

ಅಪಘಾತದಲ್ಲಿ ಇಬ್ಬರು ಮೃತ

Davangere - Desk - Mahesh Babu E

ಚಿತ್ರದುರ್ಗ: ತಾಲೂಕಿನ ಚಳ್ಳಕೆರೆ ರಸ್ತೆಯ ಕೆಳಗಳಹಟ್ಟಿ ಬಳಿ ಭಾನುವಾರ ಬಸ್, ಆಟೋ ನಡುವೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಳ್ಳಕೆರೆ ತಾಲೂಕಿನ ಕೆಂಚವೀರನಹಳ್ಳಿಯ ಪಿ.ಪವನ್ (28), ಆರ್.ಪ್ರಹ್ಲಾದ್ (27) ಮೃತರು. ಚಿತ್ರದುರ್ಗದಿಂದ ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆಟೋ ಸಂಪೂರ್ಣ ಜಖಂ ಆಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.