ಜಿಲ್ಲೆ

ನೀಲೇಶ್ವರದಲ್ಲಿ ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಮೃತ್ಯು

ಕಾಸರಗೋಡು: ನೀಲೇಶ್ವರ ತೈಕಡಪ್ಪುರದಲ್ಲಿ ಸಮುದ್ರದಲ್ಲಿ ಬಲೆಬೀಸಿ ಮೀನು ಹಿಡಿಯುವ ವೇಳೆ ಸಮುದ್ರಕ್ಕೆ ಬಿದ್ದು ಮೀನುಕಾರ್ಮಿಕ ಹಾಗೂ ಅವರನ್ನು ರಕ್ಷಿಸಲು ಮುಂದಾದ ರಕ್ಷಣಾ ಉದ್ಯೋಗಿ ಮೃತಪಟ್ಟಿದ್ದಾರೆ.

ನೀಲೇಶ್ವರ ತೈಕಡಪ್ಪುರ ಬೋಟ್ ಜೆಟ್ಟಿ ಸನಿಹದ ನಿವಾಸಿ ಮಲ್ಲಕ್ಕರ ದಾಮೋದರನ್ ಎಂಬುವರ ಪುತ್ರ ಪಿ.ಟಿ ರಾಜೇಶ್(38) ಹಾಗೂ ಕರಾವಳಿ ರಕ್ಷಣಾ ಪಡೆ ರಕ್ಷಣಾ ಬೋಟ್‌ ಉದ್ಯೋಗಿ ಸನೀಶ್ ಮೃತಪಟ್ಟವರು. ನೀರಿಗೆ ಬಿದ್ದ ರಾಜೇಶ್ ಅವರನ್ನು ರಕ್ಷಿಸಲು ಸನೀಶ್ ನೀರಿಗೆ ಧುಮುಕಿದ್ದು, ಭಾರಿ ತೆರೆಗೆ ಸಿಲುಕಿ ಇಬ್ಬರೂ ನಾಪತ್ತೆಯಾಗಿದ್ದರು. ತಕ್ಷಣ ಇತರ ಮೀನುಗಾರರು ಹಾಗೂ ರಕ್ಷಣಾ ಸಿಬ್ಬಂದಿ ಇಬ್ಬರನ್ನೂ ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.