ಜಿಲ್ಲೆ

ವೇಶ್ಯಾವಾಟಿಕೆ ನಿರತ ಇಬ್ಬರ ಬಂಧನ

ಸೌಮ್ಯ ಆರ್

ಮೂಡುಬಿದಿರೆ: ಪೇಟೆಯ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯ ನಿವಾಸಿ ರಾಜೇಶ್ ಬೋವಿ ಹಾಗೂ ಬೆಳ್ತಂಗಡಿ ತಾಲೂಕಿನ ನಾರಾವಿ ನಿವಾಸಿ ಭರತ್ ಜೈನ್ ಬಂಧಿತರು. ಅವರು ಎಸ್‌ಬಿಎ ಶಾಖೆಯ ಎದುರಿನ ಕಟ್ಟಡವೊಂದರ ಕೋಣೆಯಲ್ಲಿ ಮಹಿಳೆಯೊಬ್ಬರನ್ನು ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ತಂಡ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದೆ.