ಇಂಡಿ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಧರಣಿ ಕುಳಿತಿರುವುದು. 
ಜಿಲ್ಲೆ

ಒಂದು ಹುದ್ದೆಗೆ ಇಬ್ಬರು ಅಧಿಕಾರಿಗಳ

ಗಿರೀಶ ಸಗರ

ಇಂಡಿ: ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಬ್ಬರ ನಡುವೆ ಪೈಪೋಟಿ ನಡೆದಿದ್ದು ಒಬ್ಬರು ಸ್ಥಳಿಯ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು.

ಪ್ರತಿಭಟನೆ ನಡೆಸುತ್ತಿರುವ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರು, ಜುಲೈ 29 ರಂದು ದಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಪಂಚಾಯಿತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪಂಚಾಯಿತಿಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು.

ಮತ್ತೆ ಸರ್ಕಾರ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ನಾನು ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರ ಕಳೆದಿದೆ. ಆದರೆ ಒಂದೇ ವಾರದಲ್ಲಿ ಮತ್ತೆ ವರ್ಗಾವಣೆ ಹೇಗೆ ಸಾಧ್ಯ? ಜುಲೈ 29 ರವರೆಗೆ ಸರ್ಕಾರ ವರ್ಗಾವಣೆಗೆ ದಿನಾಂಕ ನಿಗದಿಗೊಳಿಸಿತ್ತು. ಆದರೂ ಸಹ ಜುಲೈ 31 ರಂದು ಆದೇಶ ಹೊರಡಿಸಿ ಇಂಡಿ ತಾಲೂಕ ಪಂಚಾಯಿತಿ ಕಚೇರಿಗೆ ಬಾಬುರಾವ್​ ರಾಠೋಡ ಅವರನ್ನು ಹೆಚ್ಚುವರಿಯಾಗಿ ನಿಯುಕ್ತಿಗೊಳಿಸಿರುವುದು ಎಷ್ಟು ಸರಿ? ಎಂದು ಗುರುಶಾಂತಪ್ಪ ಬೆಳ್ಳುಂಡಗಿ ಪ್ರಶ್ನಿಸಿದರು.

ಈ ಕುರಿತು ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಬೆಳ್ಳುಂಡಗಿ ಅವರು, ಸರ್ಕಾರ ನನ್ನನ್ನು ಏಕೆ ಕಡೆಗಣಿಸುತ್ತಿದೆ? ನಾನೊಬ್ಬ ನಿವೃತ್ತ ಸೈನಿಕನಾಗಿದ್ದರೂ ಸಹ ನನಗೆ ಯಾವುದೇ ಗೌರವ ನೀಡದೆ ಏಕಾಏಕಿ ಬೇರೆ ಬೇರೆ ಕಡೆ ವರ್ಗಾವಣೆ ಮಾಡುತ್ತಿರುವುದು ಎಷ್ಟು ಸರಿ? ನಾನು ಧರಣಿ ಕುಳಿತ ಸ್ಥಳಕ್ಕೆ ಯಾರೂ ಬಂದಿಲ್ಲ, ನಾನು ಸತ್ತ ಮೇಲೆ ನನ್ನ ಮಕ್ಕಳಿಗೆ 5 ಲ ರೂ. ಪರಿಹಾರ ಕೊಡಲು ಬರುತ್ತಾರೆಯೇ? ಆಗ ನನಗೆ ಬಂದು ಸಾಂತ್ವನ ಹೇಳಲು ಸಾಧ್ಯವಾ ಎಂದು ದು@ಖ ಭರಿತರಾಗಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

ಈ ಕುರಿತು ಅಧಿಕಾರ ವಹಿಸಿಕೊಂಡಿರುವ ತಾಲೂಕು ಪಂಚಾಯಿತಿ ಇನ್ನೊಬ್ಬ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾವ್​ ರಾಠೋಡ ಅವರನ್ನು ಪ್ರಶ್ನಿಸಲಾಗಿ, ಸರ್ಕಾರದ ಆದೇಶದಂತೆ ನಾನು ಇಂಡಿ ತಾಲೂಕು ಪಂಚಾಯಿತಿಗೆ ಬಂದು ಅಧಿಕಾರ ಸ್ವೀಕರಿಸಿದ್ದೇನೆ. ನಾನು ಈಗಾಗಲೇ ವಿಜಯಪುರ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುರಿಯಾಗಿ ಇಂಡಿಯಯನ್ನು ನನಗೆ ನೀಡಿದ್ದಾರೆ. ಆದೇಶದ ಪ್ರಕಾರ ಬಂದು ಅಧಿಕಾರ ಸ್ವೀಕರಿಸಿ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.