ಜಿಲ್ಲೆ

ಗೂಡ್ಸ್​ ವಾಹನ-ಬೈಕ್ ಭೀಕರ ಅಪಘಾತ; ಅಧಿಕಾರಿಗಳಿಬ್ಬರೂ ಸ್ಥಳದಲ್ಲೇ ಸಾವು..

ಗದಗ: ಬೈಕ್ ಮತ್ತು ಗೂಡ್ಸ್​ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪರಸಾಪೂರ ಕ್ರಾಸ್ ಬಳಿ ಈ ಅಪಘಾತ ಉಂಟಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ವಿ.ಎಸ್. ಬೂದಿಹಾಳ ಸ್ಥಳದಲ್ಲೇ ಸಾವಿಗೀಡಾದ ಸವಾರರು. ಇವರು ಶಿರಹಟ್ಟಿಯಿಂದ ಮಾಗಡಿ ಕಡೆಗೆ ಹೋಗುತ್ತಿದ್ದರು.

ಅಪಘಾತ ಸಂಭವಿಸುತ್ತಿದ್ದಂತೆ ಗೂಡ್ಸ್ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಶಿರಹಟ್ಟಿ ಠಾಣೆಯ ಸಿಪಿಐ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.