Zomato : ತಡವಾಗಿ ಆರ್ಡರ್ ತಂದಿದ್ದಕ್ಕೆ ಝೊಮ್ಯಾಟೊ ಏಜೆಂಟ್ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡಿಸಿರುವ ಘಟನೆ ಬೆಂಗಳೂರಿನ ಶೋಭಾ ಥಿಯೇಟರ್ ಬಳಿ ಇತ್ತೀಚೆಗೆ ನಡೆದಿದೆ.
ಝೊಮ್ಯಾಟೊ ವಿತರಣಾ ಏಜೆಂಟ್ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಇಬ್ಬರು ವ್ಯಕ್ತಿಗಳು ಆತನಿಗೆ ತಡವಾಗಿ ಬಂದಿರುವುದಕ್ಕೆ ಪ್ರಶ್ನೆ ಮಾಡಿದ್ದಾರೆ. ಈ ಮಾತಿನ ಚಕಮಕಿ ತೀವ್ರಗೊಂಡ ನಂತರ ಒಬ್ಬ ಅಲ್ಲೇ ಬಿದ್ದಿದ್ದ ಪ್ಲಾಸ್ಟಿಕ್ ಡಬ್ಬದಲ್ಲಿ ಏಜೆಂಟ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೊಬ್ಬ ಪ್ಲಾಸ್ಟಿಕ್ ಖುರ್ಚಿಯಿಂದ ಆತನ ತಲೆಯ ಮೇಲೆ ಜೋರಾಗಿ ಹೊಡೆಯುತ್ತಾನೆ. ನಂತರ ಆತನ ಬಳಿ ಇರುವ ಪಾರ್ಸೆಲ್ಗಳನ್ನು ಎಳೆಯಲಾರಂಭಿಸಿರುವ ದೃಶ್ಯವನ್ನು ಈ ವಿಡಿಯೋ ತೋರಿಸುತ್ತಿದೆ.
ತಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ಆರೋಪಿಗಳಲ್ಲಿ ಒಬ್ಬನಿಗೆ ಸರಿಯಾಗಿ ಎದ್ದು ನಿಲ್ಲಲು ಸಾಧ್ಯವಾಗದ ಕಾರಣ ಕುಡಿದಿದ್ದಂತೆ ತೋರುತ್ತಿತ್ತು. ಇನ್ನು ಘಟನೆ ತಿಳಿದ ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿದ್ದು, ವಿತರಣಾ ಏಜೆಂಟ್ ಮತ್ತು ಇಬ್ಬರು ವ್ಯಕ್ತಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಇದೇ ರೀತಿಯಲ್ಲಿ ದಿನದಿಂದ ದಿನಕ್ಕೆ ಝೊಮಾಟೋ, ಸ್ವಿಗ್ಗಿ ಇನ್ನಿತರ ವಿತರಣಾ ಏಜೆಂಟ್ಗಳ ಮೇಲೆ ಜನರು ಹಲ್ಲೆ ನಡೆಸುತ್ತಿರುವುದು ಎಥೇಚ್ಛವಾಗಿ ಬೆಳಕಿಗೆ ಬರುತ್ತಿದೆ. ಹಾಗೆಯೇ ಈ ಘಟನೆಗೆ ಸಂಬಂಧಿಸಿದಂತೆ, ಈ ವರ್ಷದ ಆರಂಭದಲ್ಲಿ, ಊಟವನ್ನು ಆರ್ಡರ್ ಮಾಡಲು ಪ್ರಯತ್ನಿಸುವಾಗ ಸತತ ಸೇವಾ ವೈಫಲ್ಯಗಳನ್ನು ಎದುರಿಸಿದ ನಂತರ ಮಹಿಳೆಯೊಬ್ಬರು ಆಹಾರ ವಿತರಣಾ ದೈತ್ಯವನ್ನು ತಲೆನೋವು ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)