ಜಿಲ್ಲೆ

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನಲ್ಲಿ ಭಾನುವಾರ ನಡೆದ ಎರಡು ಪತ್ಯೇಕ ಟನೆಯಲ್ಲಿ ಅಪರಿಚಿತ ವಾಹನ ಹಾಯ್ದು ಇಬ್ಬರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿದ್ದಾನೆ.

ಭರಮಖೋಡಿ ಕ್ರಾಸ್​ ಬಳಿ ಅಥಣಿ& ಜತ್ತ ಸಂಪರ್ಕ ರಸ್ತೆ ಮೇಲೆ ವಾಹನ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಗುಂಡೇವಾಡಿ ಗ್ರಾಮದ ಶಿವರಾಜ ಶಿತಾರಾಮ ಜಾಗವಾನಕರ (34) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಟ್ರಾ$್ಯಕ್ಟರ್​ ಚಾಲಕನಾಗಿದ್ದು, ಅಥಣಿ ಕಡೆಯಿಂದ ಸ್ವಗ್ರಾಮಕ್ಕೆ ಬೈಕ್​ ಮೇಲೆ ಹೋಗುತ್ತಿದ್ದಾಗ ಅಪಘಾತವಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಹಿಂಬದಿಯಿಂದ ಬೈಕ್​ ಡಿಕ್ಕಿ ಹೊಡೆದಿದ್ದರಿಂದ ಸಪ್ತಸಾಗರ ಗ್ರಾಮದ ರಾಜೇಸಾಬ್​ ಮಕ್ತುಮಸಾಬ್​ ಜಮಾದಾರ (75) ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡಿರುವ ಬೈಕ್​ ಸವಾರ ಪ್ರಕಾಶನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ರಾಜೇಸಾಬ್​ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾನೆ.

ಎರಡೂ ಟನೆ ಕುರಿತು ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಸ್ಥಳಕ್ಕೆ ಎಎಸ್​ಐ ವಿಠ್ಠಲ ದೇವಮಾನೆ, ತನಿಖಾ ಸಹಾಯಕ ಎಚ್​.ವೈ.ಮೇಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.