ಜಿಲ್ಲೆ

ಪ್ರಪಾತಕ್ಕೆ ಲಾರಿ ಉರುಳಿ ಇಬ್ಬರ ಸಾವು

ಆನೇಕಲ್​ : ತಾಲೂಕಿನ ಜಿಗಣಿ ಮಾರ್ಗದ ಉರಗನದೊಡ್ಡಿ ಬಳಿ ಶನಿವಾರ ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್​ವೊಂದು ಪ್ರಪಾತಕ್ಕೆ ಉರುಳಿ ಬಿದ್ದಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಜಾರ್ಖಂಡ್​ ಮೂಲದ ಶ್ರೀಮಾನ್​ (25), ಆಂಧ್ರಪ್ರದೇಶ ಮೂಲದ ಶ್ರೀನಿವಾಸ್​ (26) ಮೃತರು. ಕಂಟೇನರ್​ನಲ್ಲಿದ್ದ ಜಾರ್ಖಂಡ್​ ಮೂಲದ ಜೋಗೇಂದ್ರ (35), ಮಂಗಲೇಶ್ವರ (37), ಸುಖೇಶ್​ (27) ಮತ್ತು ಬುಲು ಓರಾನ್​(33) ಎಂಬುವರು ಗಾಯಗೊಂಡಿದ್ದು, ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಳಿಜಾರಿನಲ್ಲಿ ಕಂಟೇನರ್​ ವೇಗವಾಗಿ ಸಾಗಿದ್ದು, ನಿಯಂತ್ರಣ ಕಳೆದುಕೊಂಡಿದೆ. ಕೇಬಲ್​ ಡ್ರಿಲ್ಲಿಂಗ್​ ಮಷಿನ್​ ಆಪರೇಟರ್​ ಆಗಿದ್ದ ಶ್ರೀಮಾನ್​, ಚಾಲಕ ಶ್ರೀನಿವಾಸ್​ ಜತೆ ಮುಂಭಾಗದಲ್ಲಿ ಕುಳಿತಿದ್ದ. ಪ್ರಪಾತಕ್ಕೆ ಉರುಳಿದಾಗ ಇಬ್ಬರೂ ಕಂಟೇನರ್​ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ.

ಜೆಡಿ ಎಂಟರ್​ಪ್ರೆಸಸ್​ ಎಂಬ ಕಂಪನಿಗೆ ಸೇರಿದ ಕೇಬಲ್​ ಅಳವಡಿಕೆ ಮಾಡುವ ಡ್ರಿಲ್ಲಿಂಗ್​ ಕಂಟೇನರ್​ ಇದಾಗಿದ್ದು, ಇದೇ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ವಾಹನದಲ್ಲಿ ಇದ್ದರು. ಆನೇಕಲ್​ ತಾಲೂಕಿನ ಬೊಮ್ಮಸಂದ್ರದಿಂದ ಹಾರೋಹಳ್ಳಿಗೆ ಸಾಗುತ್ತಿತ್ತು ಎನ್ನಲಾಗಿದೆ. ಉರುಗನ ದೊಡ್ಡಿ ಬಳಿ ರಸ್ತೆ ಇಳಿಜಾರಿನಿಂದ ಕೂಡಿದೆಯಲ್ಲದೆ, ಕಠಿಣ ತಿರುವುಗಳನ್ನು ಹೊಂದಿದೆ. ಹಾಗಾಗಿ ಕಂಟೇನರ್​ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ಒಳಗಡೆ ಇದ್ದವರೆಲ್ಲರೂ ಹೊರಗೆ ಬಿದ್ದಿದ್ದಾರೆ.

ಟನೆ ಸಂಭವಿಸುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಹಾಗೂ ದಾರಿ ಹೋಕರು ನೆರವಿಗೆ ಧಾವಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಗಣಿ ಪೊಲೀಸರು ಮೃತ ದೇಹಗಳನ್ನು ಆನೇಕಲ್​ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀೆಯನ್ನು ಆನೇಕಲ್​ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಚಾಲಕರ ವಿರುದ್ಧ ದೂರು : ಅಪಘಾತದಲ್ಲಿ ಮೃತಪಟ್ಟ ಕಂಟೇನರ್​ ಚಾಲಕ ಶ್ರೀನಿವಾಸ್​ ವಿರುದ್ಧ ಅತಿಯಾದ ವೇಗ ಹಾಗೂ ಅಜಾಗರೂಕತೆ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯೋಗ ಅರಸಿ ಹೊರ ರಾಜ್ಯಗಳಿಂದ ಬಂದಿದ್ದ ಎಲ್ಲರೂ ಹಾರೋಹಳ್ಳಿಗೆ ಕೆಲಸಕ್ಕೆಂದು ಕಂಟೇನರ್​ನಲ್ಲಿ ತೆರಳುವ ವೇಳೆ ದುರ್ಟನೆ ನಡೆದಿದೆ. ಟನಾಸ್ಥಳಕ್ಕೆ ಡಿವೈಎಸ್ಪಿ ಮೋಹನ್​ಕುಮಾರ್​, ಇನ್​ಸ್ಪೆಕ್ಟರ್​ ಮಂಜುನಾಥ್​ ಭೇಟಿ ನೀಡಿ ಕ್ರೇನ್​ ಮೂಲಕ ಕಂಟೇನರ್​ ಮೇಲೆ ಎತ್ತಿಸಿದರು.

ಈ ಹಿಂದೆಯೂ ಅವಡ : ಉರುಗನ ದೊಡ್ಡಿ ಬಳಿ ಕಡಿದಾದ ಇಳಿಜಾರು ಇದೆ. ಇನ್ನೊಂದು ಭಾಗಕ್ಕೆ ಹೋಗಬೇಕಾದರೆ ಅತಿ ಎತ್ತರದ ಪ್ರದೇಶದಲ್ಲಿ ತಿರುವು ಇದೆ. ಹಾಗಾಗಿ ಇಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ರಸ್ತೆಯ ತಿರುವುಗಳನ್ನು ತೆರವು ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂಬುದು ಸ್ಥಳಿಯರ ಆಗ್ರಹವಾಗಿದೆ.