ಜಿಲ್ಲೆ

ಸಿಲಿಂಡರ್ ಸೋರಿಕೆಯಾಗಿ ಇಬ್ಬರಿಗೆ ಗಾಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಗ್ಯಾಸ್ ಸಿಲಿಂಡರ್ ಸೋರಿಕೆಯ ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದೆ.

ಕೆಂಪಲಿಂಗನಹಳ್ಳಿಯಲ್ಲಿರುವ ಆರ್ಗ್ಯಾನಿಕ್ ಫ್ಯಾಕ್ಟರಿಗೆ ಸಂಬಂಧಿಸಿದ ಶೆಡ್‌ನಲ್ಲಿ ವಾಸವಾಗಿದ್ದ ಬಿಹಾರ್ ಮೂಲದ ಬಿಕಾರಿ ನಾಯಕ್ (24) ಮತ್ತು ದೀಪಕ್ ನಾಯಕ್ (26) ಗಾಯಗೊಂಡರು.

ಕಂಪನಿಯ ಮಾಲೀಕ ಕಾರ್ಮಿಕರ ವಸತಿಗಾಗಿ ನಿರ್ಮಿಸಿದ ಶೆಡ್‌ನಲ್ಲಿ ಇಬ್ಬರೂ ಕಾರ್ಮಿಕರು ವಾಸವಾಗಿದ್ದರು.

ಮಂಗಳವಾರ ಬೆಳಗ್ಗೆ ಎಂದಿನಂತೆ ತಿಂಡಿ ಮಾಡಲು ತೆರಳಿದ್ದ ದೀಪಕ್ ಗ್ಯಾಸ್ ಸಿಲಿಂಡರ್ ಸೋರಿಕೆಯಾಗದಿರುವುದನ್ನು ಗಮನಿಸದೆ ಲೈಟರ್ ಹಚ್ಚಿದ್ದಾನೆ. ಸಿಲಿಂಡರ್‌ನಿಂದ ಬೆಂಕಿ ಸ್ಪೋಟಿಸಿ ಇಬ್ಬರಿಗೂ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ. ಪಕ್ಕದ ಶೆಡ್ ಕಾರ್ಮಿಕರು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.