ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನಿಗೆ ಚಾಕು ಇರಿಯಲು ಮುಂದಾಗಿದ್ದ ಯುವಕರ ಮೇಲೆಯೇ ಅದೇ ಚಾಕುವಿನಿಂದ ವಾಪಸ್ ಚಾಕು ಇರಿದಿರುವ ಘಟನೆ ಸಂತೋಷನಗರದ ಜೆ.ಕೆ. ಸ್ಕೂಲ್ ಹತ್ತಿರ ಜರುಗಿದೆ.
ಘಟನೆಯಲ್ಲಿ ಭೀಮಪ್ಪ ಗೊಲ್ಲರ, ಕಿರಣ ಕಬ್ಬೇರ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ರಹಮಾನ್ ಎಂಬಾತ ಚಾಕು ಇರಿದಿದ್ದಾನೆ ಎಂದು ತಿಳಿದುಬಂಮ್ಸ
ಈ ಮೂವರು ಸ್ನೇಹಿತರಾಗಿದ್ದು, ಪ್ರತಿನಿತ್ಯ ಜತೆಯಲ್ಲಿ ಓಡಾಡುತ್ತಿದ್ದರು. ಅದರಂತೆ ಇಂದು ಸಂಜೆ ಜತೆಯಲ್ಲಿದ್ದಾಗ ಕ್ಷುಲ್ಲಕ ವಿಚಾರಕ್ಕೆ ತಂಟೆ ನಡೆದಿದ್ದು, ಭಿಮ್ಮಪ್ಪ ಗೊಲ್ಲರ, ಕಿರಣ ಕಬ್ಬೇರ ಎಂಬುವವರು ರೆಹಮಾನ್‌ಗೆ ಚಾಕು ಇರಿಯಲು ಮುಂದಾಗಿದ್ದಾರೆ. ಆಗ ರೆಹಮಾನ್ ಅದೇ ಚಾಕು ಕಸಿದು ವಾಪಸ್ ಚುಚ್ಚಿದ್ದಾನೆಂದು ಹೇಳಲಾಗುತ್ತಿದೆ. ಪರಿಣಾಮ ಭೀಮಪ್ಪ, ಕಿರಣನ ಕುತ್ತಿಗೆ, ಕಣ್ಣಿನ ಹುಬ್ಬಿಗೆ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಅಶೋಕ ನಗರದ ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಶೋಕ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.