ಜಿಲ್ಲೆ

ಇಬ್ಬರು ಮನೆಗಳ್ಳರ ಬಂಧನ

ವೀರೇಶ ಸೌದ್ರಿ

ಶಿರಸಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಮನೆಯ ಬೀಗ ಮುರಿದು ಕಳ್ಳರು ಬಂಗಾರ ದೋಚಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಬನವಾಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿಯ ನಾಲ್ಕು ಮನೆಗಳಲ್ಲಿ 2024ರ ನವೆಂಬರ್‌ನಲ್ಲಿ ಹಾಗೂ 2025ರ ಏ. 14ರಂದು ಕಳ್ಳರು ಕೈಚಳಕ ತೋರಿದ್ದರು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಹಾನಗಲ್ಲ ತಾಲೂಕು ಶೃಂಗೇರಿ ನಿವಾಸಿಗಳಾದ ಅಬ್ದುಲ್ ಸತ್ತಾರ್ ಮೆಹಬೂಬ್ ಶೇಕ್ ( 27) ಹಾಗೂ ಶಫಿ ಸಾಬ್ (37) ಎಂಬುವವರನ್ನು ಬಂಧಿಸಿದ್ದಾರೆ. ಪಿಎಸ್‌ಐ ಚಂದ್ರಕಲಾ ಪತ್ತಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.