ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ ಎನ್ ಐಟಿಕೆ ಬೀಚ್ ನಲ್ಲಿ ಭಾನುವಾರ ಬೆಳಗ್ಗೆ ಇಬ್ಬರು ಸಹೋದರಿಯರು ಸಮುದ್ರಪಾಲಾಗಿದ್ದಾರೆ.
ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದ ಇವರು ಸಮುದ್ರ ಕಿನಾರೆಯಲ್ಲಿ ಅಟವಾಡುತ್ತಿದ್ದಾಗ ಬೃಹತ್ ಅಲೆಯೊಂದು ಇವರನ್ನು ಎಳೆದುಕೊಂಡು ಹೋಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.