ಜಿಲ್ಲೆ

ಕರೊನಾ ಶಂಕೆ: ಮೂವರು ವಿದೇಶಿ ವಿದ್ಯಾರ್ಥಿಗಳು ಮಣಿಪಾಲ ಕೆಎಂಸಿಗೆ ದಾಖಲು

ಉಡುಪಿ: ಕರೊನಾ ಶಂಕಿತ ಮೂವರು ವಿದೇಶಿ ವಿದ್ಯಾರ್ಥಿಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ.

ಇಬ್ಬರು ವಿದ್ಯಾರ್ಥಿಗಳು ಅಮೆರಿಕ, ಮಲೆಷೀಯಾ ಮತ್ತು ಕುವೈತ್‌ನಿಂದ ಬಂದವರಾಗಿದ್ದು, ಇವರು ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಇವರಲ್ಲಿ ವೈರಸ್ ಸೋಂಕಿನ ಶಂಕಿತ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆ ಐಸೋಲೇಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ವಿದ್ಯಾರ್ಥಿಗಳ ಗಂಟಲ ದ್ರವ್ಯ ಹಾಗೂ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.