ಜಿಲ್ಲೆ

ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು

ಎನ್.ವೆಂಕಟೇಶ್

 ಕೃಷಿಹೊಂಡಕ್ಕೆ ಪೈಪ್ ಅಳವಡಿಸುವ ವೇಳೆ ಅವಘಡ | ಅಧಿಕಾರಿಗಳಿದ ಸ್ಥಳ ಪರಿಶೀಲನೆ

ಚೇಳೂರು: ತಾಲೂಕಿನ ಕುರಪಲ್ಲಿ ಗ್ರಾಮದಲ್ಲಿ ಸೋಮವಾರ ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.

ಕುರಪಲ್ಲಿ ಗ್ರಾಮದ ರಾಧಮ್ಮ (17), ಸಾಹಿತಿ (14) ಮೃತರು.

ರಾಧಮ್ಮ ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು, ಸಾಹಿತಿ ಗಡಿದಂನ ಆದರ್ಶ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಇಬ್ಬರಿಗೂ ತಂದೆಯಿಲ್ಲ. ರಾಧಮ್ಮ ಅವರ ತಾಯಿ ಅಮರಾವತಿ ಹಾಗೂ ಸಾಹಿತಿ ತಾಯಿ ಸುಕನ್ಯಾ ಸೋಮವಾರ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಜತೆಯಲ್ಲಿದ್ದ ರಾಧಮ್ಮ ಹಾಗೂ ಸಾಹಿತಿ ಕಾಲುಜಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಇನ್‌ಸ್ಪೆಕ್ಟರ್ ಹರೀಶ್ ಹಾಗೂ ಕೃಷಿ ಅಧಿಕಾರಿ ಗಂಗಾಧರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇಪಲ್ಲಿ ಆಸ್ಪತ್ರೆಗೆ ಕಳಿಸಿದ್ದಾರೆ. ಪಾತಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.