ಬ್ಯಾಡಗಿ: ಹರಿಹರ ಸಮ್ಮಸಗಿ ರಾಜ್ಯ ಹೆದ್ದಾರಿಯ ತುಮರಿಕೊಪ್ಪ ಗ್ರಾಮದ ಬಳಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಜರುಗಿದೆ.
ಮೃತರನ್ನು ಚಂದ್ರಪ್ಪ ಕರಿಯಪ್ಪ ಚೌಟಿಗೇರ (38) ಹಾಗೂ ಲೋಹಿತ ಮಲ್ಲಪ್ಪ ಚೌಟಿಗೇರ (36) ಎಂದು ಗುರುತಿಸಲಾಗಿದೆ. ಸಹೋದರ ಸಂಬಂಧಿಗಳು ಬೈಕ್ನಲ್ಲಿ ಹೊಲದಿಂದ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಗಿನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.