ಜಿಲ್ಲೆ

ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತ್ಯು

ಎನ್.ವೆಂಕಟೇಶ್

ಮಂಚೇನಹಳ್ಳಿ: ಗೌರಿಬಿದನೂರಿನ ಬೈಪಾಸ್​ ಗಣೇಶನ ಮೆರವಣಿಗೆ ನೋಡಲು ತೆರಳುತ್ತಿದ್ದಾಗ ಮುದುಗಾನಗುಂಟೆ ಕ್ರಾಸ್​ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬನಿಗೆ ಗಂಭೀರ ಗಾಯವಾಗಿದೆ. ಮಂಚೇನಹಳ್ಳಿಯ ಶಫಿ (42), ಮೆಕ್ಯಾನಿಕ್​ ಮುನಿರಾಜ(32)ಮೃತರು. ಕಣ್ಣು ಮತ್ತು ತಲೆಗೆ ಬಲವಾಗಿ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿರುವ ರಮೇಶ್​(42)ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಂಚೇನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.