ಜಿಲ್ಲೆ

ಎಂ.ಕೆ.ಹುಬ್ಬಳ್ಳಿಯಲ್ಲಿ ವಾರದಲ್ಲಿ ಎರಡು ದಿನ ಸಂತೆ

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ದಿನೇ ದಿನೆ ಬೆಳೆಯುತ್ತಿರುವುದರಿಂದ ಸೋಮವಾರ ಜತೆ, ಗುರುವಾರವೂ ಸಂತೆ ನಡೆಯಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ ಹೇಳಿದರು.

ಪಟ್ಟಣದ ಬಸವ ನಗರದ 3ನೇ ಕ್ರಾಸ್​ನಲ್ಲಿ ಗುರುವಾರದ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ವಾರ್ಡ್​ ನಂ.1ರಿಂದ 4ರವರೆಗಿನ ನಿವಾಸಿಗಳಿಗೆ ಗುರುವಾರದ ಸಂತೆ ಅನುಕೂಲವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಪಾಲ್ಗೊಳ್ಳಬೇಕು. ನಿವಾಸಿಗಳು ಸಂತೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.

ವಾರ್ಡ್​ ಸದಸ್ಯ ದೊಡ್ಡಪ್ಪ ಗಣಾಚಾರಿ ಮಾತನಾಡಿ, ಕೋವಿಡ್​&19 ಮುಂಚೆ ಗುರುವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆ ಈಗ ಮರು ಆರಂಭಿಸಿದ್ದೇವೆ ಎಂದರು. ಮುಖಂಡರಾದ ಬಸಪ್ಪ ವಿಠ್ಠಪ್ಪನವರ, ಮಕ್ತುಂಹುಸೇನ್​ ದೇವಲಾಪೂರ, ಸೋಮಶೇಖರ ಅಂಬಡಗಟ್ಟಿ, ದೊಡ್ಡಪ್ಪ ಗೋಕಾರ, ಶಿವಾನಂದ ಪೂಜೇರ, ಅದಶ್ಯ ಕರಬಣ್ಣವರ, ಅಜೀಂ ದೇದಾರ, ಇಬ್ರಾಹಿಂ ಪಟೇಲ್​, ಕರೀಂಸಾಬ್​ ಪೀರಜಾದೆ, ಮಂಜುಳಾ ಕರಬಣ್ಣವರ, ಗಾಯತ್ರಿ ಪಾಟೀಲ, ಮಹಾದೇವಿ ಸಂಗೆನವರ, ಅಣ್ಣವ್ವ ವಿಠ್ಠಪ್ಪನವರ ಇತರರಿದ್ದರು.