ಸಿಂಧನೂರಿನ ನಗರಸಭೆ ಕಚೇರಿಯಲ್ಲಿ ಡಿಎಂಎ ಇಇ ನಿರಂಜನಮೂರ್ತಿ ನೇತೃತ್ವದ ತಂಡ ಮಂಗಳವಾರ ದಾಖಲೆಗಳನ್ನು ಪರಿಶೀಲಿಸಿತು. 
ಜಿಲ್ಲೆ

ಎರಡು ದಿನಗಳ ಕಾಲ ಪರಿಶೀಲನೆ

ಸಿಂಧನೂರು: ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಸೇರಿ ನಾನಾ ಯೋಜನೆಗಳ ಅನುಷ್ಠಾನ ಕುರಿತಂತೆ ಪೌರಾಡಳಿತ ನಿರ್ದೇಶನಾಲಯದ ಇಇ ನಿರಂಜನಮೂರ್ತಿ ನೇತೃತ್ವದ ತಂಡ ಎರಡು ದಿನಗಳ ಕಾಲ ನಗರದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿತು.

ಮಂಗಳವಾರ ಮಧ್ಯಾಹ್ನ ನಗರಸಭೆ ಕಚೇರಿಗೆ ಆಗಮಿಸಿದ ಅಧಿಕಾರಿಗಳ ತಂಡ, ಸಿಬ್ಬಂದಿ ಕರೆದು ದಾಖಲೆಗಳ ಪರಿಶೀಲನೆಗೆ ಮುಂದಾಗಿತು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಎಇಇ ಮನ್ಸೂರ್ ಅಹ್ಮದ್, ಕಂದಾಯ ಅಧಿಕಾರಿ ಮಾಧುರಿ, ಜೆಇ ಶಾಂತಕುಮಾರ ಇತರರಿದ್ದರು.