ಜಿಲ್ಲೆ

30ರಿಂದ ಎರಡು ದಿನ ಮೈಸೂರಿನಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರ

ಆರ್.ಕೃಷ್ಣ

ಮೈಸೂರು: ಸಂವಿಧಾನ ಓದು ಅಭಿಯಾನ- ಕರ್ನಾಟಕದಿಂದ ನ.30 ಮತ್ತು ಡಿ.1ರಂದು ಸಂವಿಧಾನ ಓದು ಅಧ್ಯಯನ ಶಿಬಿರ ಆಯೋಜಿಸಲಾಗಿದೆ.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನ.30ರಂದು ಬೆಳಗ್ಗೆ 10ಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಪ್ರಗತಿಪರ ಚಿಂತಕಿ ಸುಶೀಲಾ ಬಸವಲಿಂಗಯ್ಯ ಇತರರು ಭಾಗವಹಿಸುವರು ಎಂದು ಕೇಂದ್ರದ ಸಂಯೋಜಕ ಬಿ.ರಾಜಶೇಖರ ಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನಗಳ ಕಾರ್ಯಾಗಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ವಿಷಯ ತಜ್ಞರಾದ ಡಾ. ಗೋವಿಂದಪ್ಪ ಪಾವಗಡ, ಬಿ. ರಾಜಶೇಖರಮೂರ್ತಿ, ಡಾ. ಕರಿಯಣ್ಣ ಇನ್ನಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ ಎಂದರು.

ಡಿಸೆಂಬರ್ 1ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು, ಪ್ರಶಸ್ತಿಪತ್ರ ವಿತರಣೆ ಮಾಡಲಾಗುವುದು. ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ. ಸಬೀರ ಅಹಮ್ಮದ್ ಮುಲ್ಲಾ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜಾ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಲ್ಲ ಜಿಲ್ಲೆ, ತಾಲೂಕುಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾಮಾಜಿಕ- ಸಾಂಸ್ಕೃತಿಕ ಹಾಗೂ ಪ್ರಗತಿಪರ ಆಶಯವುಳ್ಳ ಸುಮಾರು 300 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಂಘಟನೆಯ ಎಚ್.ಎನ್. ಶ್ರೀಹರಿ, ಉಗ್ರ ನರಸಿಂಹೇಗೌಡ, ಸುಶೀಲಾ ಬಸು, ಅನಿಲ್ ಇತರರು ಇದ್ದರು.