ಜಿಲ್ಲೆ

ಸೈಬರ್ ಕಳ್ಳರಿಬ್ಬರ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸುತ್ತಿದ್ದ ಇಬ್ಬರು ಸೈಬರ್ ಕಳ್ಳರನ್ನು ಇಲ್ಲಿಯ ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಣಕಲ್‌ನ ಅಜಯ ಹಿರೇಮಠ (23), ವಿದ್ಯಾನಗರದ ಭರತ ಜೈನ್ (27) ಬಂಧಿತರು. ವಿದ್ಯಾನಗರ ನಿವಾಸಿಯೊಬ್ಬರಿಗೆ ಕೆಕೆಆರ್‌ಸಿಎ ಸ್ಟಾಕ್ ಇನ್‌ವೆಸ್ಟ್‌ಮೆಂಟ್ ಎನ್ನುವ ಆನ್‌ಲೈನ್ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಅಂದರೆ ಶೇ. 500 ರಷ್ಟು ಲಾಭ ಪಡೆಯಬಹುದೆಂದು ನಂಬಿಸಿ 84,11,000 ರೂ. ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿಕೊಂಡಿದ್ದರು. ಆದರೆ, ಯಾವುದೇ ಲಾಭಾಂಶ ಕೊಟ್ಟಿರಲಿಲ್ಲ. ಈ ಕುರಿತು ದೂರು ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ಅವರು ಇಬ್ಬರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.