ಮಸ್ಕಿಯ ಜಾಫರ್ ಚಿಕನ್ ಮತ್ತು ಮಟನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ಬಾಲಕ ಕಾರ್ಮಿಕ ಯೋಜನೆಯ ಅಧಿಕಾರಿಗಳು.ಅಧಿಕಾರಿಗಳಾದ ಮಂಜುನಾಥರಡ್ಡಿ, ಶಾಂತಮೂರ್ತಿ, ರಾಮಸ್ವಾಮಿ ಹಾಗೂ ಶೀವಲೀಲಾ ಹಿರೇಮಠ ಇತರರಿದ್ದರು. 
ಜಿಲ್ಲೆ

ಮಸ್ಕಿಯಲ್ಲಿ ಇಬ್ಬರು ಬಾಲಕರ ರಕ್ಷಣೆ

ನರೇಶ್ ಕುಮಾರ್

ಮಸ್ಕಿ: ಪಟ್ಟಣದ ವಿವಿಧ ಅಂಗಡಿ, ಚಿಕನ್ ಸೆಂಟರ್‌ಗಳ ಮೇಲೆ ಬಾಲ ಕಾರ್ಮಿಕರ ಯೋಜನೆಯ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಶನಿವಾರ ದಾಳಿ ನಡೆಸಿ ಇಬ್ಬರು ಬಾಲಕರನ್ನು ರಕ್ಷಿಸಿದರು.

ಪಟ್ಟಣದ ಜಾಫರ್ ಚಿಕನ್ ಮತ್ತು ಮಟನ್ ಸೆಂಟರ್ ಹಾಗೂ ಸದ್ದಾಂ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕರನ್ನು ರಕ್ಷಣೆ ಮಾಡಿ ಮಾಲೀಕರ ವಿರುದ್ಧ 1986 ಮತ್ತು 2016 ಬಾಲ ಕಾರ್ಮಿಕ ತಿದ್ದುಪಡಿ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಮಂಜುನಾಥ ರಡ್ಡಿ ಮಾತನಾಡಿ, ಅಂಗಡಿ ಮಾಲೀಕರು ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ. ಇದಕ್ಕೆ ಎರಡು ವರ್ಷ ಜೈಲು ಶಿಕ್ಷೆ ಅಥವಾ 50 ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, ಮಕ್ಕಳನ್ನು ಸೇರಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

ಲಿಂಗಸುಗೂರು ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಸಿಆರ್‌ಪಿ ರಾಮಸ್ವಾಮಿ, ಮಸ್ಕಿಯ ಮೇಲ್ವಿಚಾರಕಿ ಶೀವಲೀಲಾ ಹಿರೇಮಠ, ಆನಂದರಾಜ್, ಮಾನಪ್ಪ ಇತರರಿದ್ದರು.