ಹುಬ್ಬಳ್ಳಿ: ಮಕ್ಕಳು ಆಟ ಆಡುತ್ತಲೇ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಇದೀಗ ಇನ್ನಿಬ್ಬರು ಮಕ್ಕಳು ಹೀಗೆ ಮಕ್ಕಳಾಟದಿಂದಾಗಿ ಜೀವ ಕಳೆದುಕೊಂಡ ಪ್ರಕರಣ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಆಟ ಆಡ್ತ ಆಡ್ತ ಕರೆಂಟ್ ಶಾಕ್ ಹೊಡೆದು ಸಾವಿಗೀಡಾದ ಬಾಲಕ; ಟ್ರಾನ್ಸ್ಫಾರ್ಮರ್ ಕೆಳಗೆ ಬಿದ್ದಿತ್ತು ಪವರ್ಫುಲ್ ತಂತಿ..
ಇಲ್ಲಿನ ಮಕ್ಕಳು ಮನೆಯ ಹಿಂದಿರುವ ಮಣ್ಣಿನ ಕ್ವಾರಿಯಲ್ಲಿ ಆಟವಾಡಲು ತೆರಳಿದ್ದರು. ನೀರು ತುಂಬಿದ್ದ ಮಣ್ಣಿನ ಕ್ವಾರಿಯಲ್ಲಿ ಈಜಲು ಹೋದ ಮೂವರು ಬಾಲಕರಲ್ಲಿ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಹರೀಶ್ ಶಿವಳ್ಳಿ ಗೌಡರ್ (7) ಮತ್ತು ಗೌತಮ ಶಿವಳ್ಳಿಗೌಡ ಮೃತಪಟ್ಟಿರುವ ಮಕ್ಕಳು.
ಇದನ್ನೂ ಓದಿ: ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!
ಇನ್ನೊಬ್ಬ ಬಾಲಕ ಮಣ್ಣಿನ ಕ್ವಾರಿಯಲ್ಲಿ ತುಂಬಿದ್ದ ನೀರು ಕುಡಿದು ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳನ್ನು ಕ್ವಾರಿಯಿಂದ ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.