ಜಿಲ್ಲೆ

ಸ್ನೇಹಿತರ ಕಣ್ಣೆದುರಲ್ಲೇ ಬಾಲಕರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

ತುಮಕೂರು: ಕೆರೆಯಲ್ಲಿ ಈಜಾಡಲೆಂದು ಹೋಗಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ದುರ್ಮರಣಕ್ಕೀಡದ ಘಟನೆ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ಸಂಭವಿಸಿದೆ.

ಹೊಸಹಳ್ಳಿಯ ನಂದನ್ ಕುಮಾರ್(16) ಹಾಗೂ ಸತೀಶ್ (15) ಮೃತ ದುರ್ದೈವಿಗಳು. ಇವರಿಬ್ಬರೂ ಸ್ನೇಹಿತರ ಕಣ್ಣೆದುರಲ್ಲೇ ಜಲಸಮಾಧಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಐವರು ಸ್ನೇಹಿತರು ಅಕ್ಕಿರಾಂಪುರ ಕೆರೆಗೆ ಶುಕ್ರವಾರ ಈಜಾಡಲು ತೆರಳಿದ್ದರು.

ಈಜುಬಾರದ ಸತೀಶ್ ಕೆರೆಯಲ್ಲಿ ತೆಗೆದ ಆಳವಾದ ಗುಂಡಿಯಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ನಂದನ್ ಕುಮಾರ್ ಸಹ ಮುಳುಗಿದ್ದಾನೆ. ಅಷ್ಟರಲ್ಲಿ ಆಕಾಶ್ ಎಂಬಾತ ಮುಳುಗುತ್ತಿದ್ದ ಸ್ನೇಹಿತರಿಬ್ಬರ ರಕ್ಷಣೆಗೆ ಮುಂದಾಗಿದ್ದಾನೆ. ತಕ್ಷಣವೇ ಮಧುಸೂದನ್ ಎಂಬಾತ ಆಕಾಶ್​ನನ್ನು ಎಳೆದುಕೊಂಡಿದ್ದಾನೆ.

ನಂದನ್ ಕುಮಾರ್​ನ ದೇಹವನ್ನು ಮೇಲೆತ್ತಲಾಗಿದೆ. ಸತೀಶ್​ನ ಶವ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಮಧ್ಯಾಹ್ನ 3.30 ಆದರೂ ಪತ್ತೆಯಾಗಿರಲಿಲ್ಲ.