ಜಿಲ್ಲೆ

ನ.2ರಂದು ಎರಡು ಪುಸ್ತಕಗಳ ಲೋಕಾರ್ಪಣೆ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ-ಬನಹಟ್ಟಿ: ರಬಕವಿ ಎಂ.ವಿ. ಪಟ್ಟಣ ಪ.ಪೂ ಕಾಲೇಜಿನ ಅರ್ಥಶಾಸ್ತ್ರ ವಿಷಯದ ನಿವೃತ್ತ ಉಪನ್ಯಾಸಕ ಎಂ.ಎಸ್. ಬದಾಮಿ ಅವರು ರಚಿಸಿದ ‘ರತನ್ ಟಾಟಾ, ಬದುಕು ಮತ್ತು ಬೆವರು ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವು ನ. 2ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಬನಶಂಕರಿ ಸಮುದಾಯ ಭವನದಲ್ಲಿ ನಡೆಯಲಿದೆ.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಮುರುಗೇಶ ನಿರಾಣಿ ಪುಸ್ತಕ ಬಿಡುಗಡೆ ಮಾಡುವರು. ತೇರದಾಳದ ಖ್ಯಾತ ವೈದ್ಯ ಡಾ. ಮಹಾವೀರ ದಾನಿಗೊಂಡ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಸಂಗಮೇಶ ನಿರಾಣಿ ಆಗಮಿಸುವರು. ಸಾಹಿತಿಗಳಾದ ಶಿವಾನಂದ ದಾಶ್ಯಾಳ ಹಾಗೂ ಬನಹಟ್ಟಿಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಲಕ್ಷ್ಮೀ ನಿಂಬರಗಿ ಪುಸ್ತಕ ಪರಿಚಯ ಮಾಡುವವರು. ಕಸಾಪ ತಾಲೂಕಾಧ್ಯಕ್ಷ ಮ.ಕೃ. ಮೇಗಾಡಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.