ಜಿಲ್ಲೆ

ಇಬ್ಬರು ಬೈಕ್ ಸವಾರರ ಸಾವು

ವೀರೇಶ ಸೌದ್ರಿ

ಹಳಿಯಾಳ: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ದುರ್ಘಟನೆ ಪಟ್ಟಣದ ದೇವಗಿರಿ ಕೆರೆಯ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಛತ್ರನಾಳ ಗ್ರಾಮದ ನಿವಾಸಿ ಸಂದೇಶ ಮಾರುತಿ ಚಾವಲೇಕರ (21) ಹಾಗೂ ಪಟ್ಟಣದ ತಾನಾಜಿ ಗಲ್ಲಿಯ ಕಾರ್ತಿಕ ಸಾಂಬ್ರೇಕರ (21) ಮೃತ ದುರ್ದೈವಿಗಳಾಗಿದ್ದಾರೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.