ಕೆರೂರ: ಸಮೀಪದ ಹೂಲಗೇರಿ ಗ್ರಾಮದ ಹತ್ತಿರ ಟ್ಯಾಂಕರ್ (ಲಾರಿ) ಹಾಗೂ ಬೈಕ್ ನಡುವೆ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೆರೂರ ಪಟ್ಟಣದ ಕಿಲ್ಲಾಪೇಟೆ ನಿವಾಸಿಗಳಾದ ರಾಜೇಸಾಬ ವಠಾರದ(22),ಪ್ರದೀಪ ಗದಗಿಮಠ(25) ಸಾವಿಗೀಡಾಗಿದ್ದಾರೆ. ಗದ್ದನಕೇರಿ ಕ್ರಾಸ್‌ನಿಂದ ಕೆರೂರ ಕಡೆ ಬರುತ್ತಿದ್ದ ಬೈಕ್ ಹೂಲಗೇರಿ ಗ್ರಾಮದ ಜಿಯೋ ಪಂಪ್ ಹತ್ತಿರ ಗದ್ದನಕೇರಿ ಕ್ರಾಸ್ ಕಡೆ ಹೋಗುತ್ತಿದ್ದ ಟ್ಯಾಂಕರ್(ಲಾರಿ)ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಭೀಮಪ್ಪ ರಬಕವಿ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.