ಜಿಲ್ಲೆ

ಇಬ್ಬರು ಬೈಕ್​ ಕಳ್ಳರ ಬಂಧನ, 7 ವಾಹನ ವಶ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಹಿರೇಬಾಗೇವಾಡಿ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಸಂತೋಷ ಬೇವಿನಕೊಪ್ಪ, ಖಾನಾಪುರದ ರಾಜು ಪಾಟೀಲ ಎಂಬ ಆರೋಪಿಗಳನ್ನು ಬಂಧಿಸಿರುವ ಹಿರೇಬಾಗೇವಾಡಿ ಪೊಲೀಸರು 4.10 ಲಕ್ಷ ರೂ. ಮೌಲ್ಯದ 7 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಶ್ರೀನಗರ, ವಡಗಾವಿ, ಮುನವಳ್ಳಿ, ಹುಬ್ಬಳ್ಳಿ ಸೇರಿ ವಿವಿಧೆಡೆಯ ಬೈಕ್​ ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.