ಜಿಲ್ಲೆ

ಇಬ್ಬರು ಬೈಕ್​ ಕಳ್ಳರ ಬಂಧನ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರೂಗೇರಿ ಠಾಣೆ ಪೊಲೀಸರು ಶನಿವಾರ ಇಬ್ಬರು ಕಳ್ಳರನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸಾಗರ ಚನ್ನದಾಸರ, ಹಿಡಕಲ್​ ಗ್ರಾಮದ ಶಿವಾನಂದ ಕಾಂಬಳೆ ಬಂಧಿತರು. ಕುಡಚಿ ಪಟ್ಟಣದಲ್ಲಿ ಬೈಕ್​ ಕಳ್ಳತನ ಕುರಿತು ಅಹ್ಮದಖಾನ್​ ಮುಜಾವರ್​ ಎಂಬುವವರು ಸೆ.12ರಂದು ಹಾರೂಗೇರಿ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.